ಮಾಧವದೇವ -
ಸುಮಾರು 1650. ಜೈನಕವಿ. ನರಪಿಂಗಲಿ ಎಂಬ ಶಾಸ್ತ್ರ ಗ್ರಂಥದ ಕರ್ತೃ. ಇವನಿಗೆ ಅರ್ಹದ್ದಾಸ ಎಂಬ ಹೆಸರೂ ಇದ್ದಂತೆ ತೋರುತ್ತದೆ.

ನರಪಿಂಗಲಿ ಕಂದದಲ್ಲಿ ರಚಿತವಾಗಿದ್ದು ಇದರಲ್ಲಿ ಶಕುನಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳು ನಿರೂಪಿತವಾಗಿವೆ. ಅಂದಿನ ಜನಜೀವನದಲ್ಲಿ ಇದ್ದ ರೂಢಿ, ಸಂಪ್ರದಾಯ, ಮೂಢನಂಬಿಕೆ-ಮುಂತಾದವನ್ನು ಈ ಗ್ರಂಥ ಎತ್ತಿ ತೋರಿಸುತ್ತದೆ. ಕಾವ್ಯಾಂಶಗಳು ಕ್ವಚಿತ್ತಾಗಿ ಕಂಡುಬರುತ್ತವೆ. ಪೊಚ್ಚ ಪೊಸಗನ್ನಡದಿಂದ ಯಂತ್ರ ಮಂತ್ರ ತಂತ್ರಾದಿ ವಿಚಾರಗಳನ್ನೂ ಗೇಯ ರಸಭಾವದಲ್ಲಿ ಶಕುನಶಾಸ್ತ್ರವನ್ನೂ ಹೇಳುವ ಸಾಮಥ್ರ್ಯ ಹೊಂದಿರುವೆನೆಂದು ಕವಿ ಸ್ವಪ್ರಶಂಸೆ ಮಾಡಿಕೊಂಡಿದ್ದಾನೆ. ಆದರೆ ಗ್ರಂಥವನ್ನು ಓದಿದಾಗ ಈತನ ಮಾತು ಸತ್ಯ ಎನಿಸದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ